Satya HN
5 साल 6 महीने पहले
ನಮಸ್ಕಾರ ಮೋದೀಜಿ,
ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಲು ಈ ಕೆಳಗಿನ ವಿಚಾರವನ್ನು ತಮ್ಮ ಅವಗಾಹನೆಗೆ ತರಲು ಬಯಸುತ್ತೇನೆ.
ಭಾರತ ವಾತಾವರಣದಲ್ಲೂ ವೈವಿಧ್ಯತೆ ಹೊಂದಿರುವ ರಾಷ್ಟ್ರ, ಇಲ್ಲಿ ಬರಗಾಲ ಒಂದೆಡೆ ಗೋಚರವಾದರೆ, ಅತಿವೃಷ್ಟಿ ಜನರ ಎಲ್ಲಾ ಆಶೋತ್ತರಗಳನ್ನು ನಾಶ ಮಾಡಿ ಭವಿಷ್ಯವನ್ನು ಭಗ್ನಗೊಳಿಸುತ್ತಿದೆ. ತುಂಬಾ ತೊಂದರೆ ಒದಗುತ್ತಿರುವ ಸ್ಥಳಗಳನ್ನು ಗುರಿಸಿ ಶಾಶ್ವತವಾದ ಬಹು ಮಹಡಿ ವಾಸದ ಸಂಕೀರ್ಣಗಳನ್ನು ಒದಗಿಸಿ ಕೊಟ್ಟರೆ ಜನರ ತತ್ತರ ಕಡಿಮೆಯಾಗಲಿದೆ. ಕೆಳ ಅಂತಸ್ತನ್ನೂ ವಾಹನ ನಿಲುಗಡೆಯ ರೀತಿ ನಿರ್ಮಿಸಿ ಭದ್ರಪಡಿಸಿದರೆ ಗುಳೇ ಪ್ರಕರಣಗಳು ತಗ್ಗುತ್ತವೆ. ನಾಲ್ಕೈದು ಸಂಕೀರ್ಣಗಳು ಒಂದೂರಿಗೆ ಸಾಲುತ್ತವೆ. ನಮಸ್ತೆ
पसंद
(1)
नापसन्द
(3)
जवाब दो
स्पैम की रिपोर्ट करें